ಶ್ರುತಿ ಎನ್ನುವುದು ಒಂದು ಸಂಸ್ಕೃತ ಶಬ್ದವಾಗಿದ್ದು ಹಿಂದೂ ಧರ್ಮದ ವೈದಿಕ ಪಠ್ಯಗಳಲ್ಲಿ ಕಂಡುಬರುತ್ತದೆ. ಇದರರ್ಥ ಸಾಹಿತ್ಯ ಅಥವಾ ಸಾಮಾನ್ಯವಾಗಿ ಕೇಳಿಸಿಕೊಂಡದ್ದು ಎಂದು. ಇದು ಭಾರತೀಯ ಸಂಗೀತದಲ್ಲೂ ಒಂದು ಮುಖ್ಯವಾದ ಪರಿಕಲ್ಪನೆಯಾಗಿದೆ. ಸಂಗೀತದಲ್ಲಿ ಇದರರ್ಥ ಕಿವಿಯು ಪತ್ತೆಹಚ್ಚಬಲ್ಲ ಮತ್ತು ಒಬ್ಬ ಗಾಯಕ ಅಥವಾ ಸಂಗೀತ ವಾದ್ಯವು ಉತ್ಪಾದಿಸಬಲ್ಲ ಸ್ವರದ ಮಟ್ಟದ ಅತ್ಯಂತ ಚಿಕ್ಕ ಅಂತರ. ಸಂಗೀತದ ಶ್ರುತಿ ಪರಿಕಲ್ಪನೆಯು ನಾಟ್ಯ ಶಾಸ್ತ್ರ, ದತ್ತಿಲಂ, ಬೃಹದ್ದೇಶಿ, ಮತ್ತು ಸಂಗೀತ ರತ್ನಾಕರದಂತಹ ಪ್ರಾಚೀನ ಮತ್ತು ಮಧ್ಯಯುಗದ ಸಂಸ್ಕೃತ ಪಠ್ಯಗಳಲ್ಲಿ ಕಂಡುಬರುತ್ತದೆ. ಛಾಂದೋಗ್ಯೋಪನಿಷತ್ ಅಷ್ಟಮವನ್ನು ೨೨ ಭಾಗಗಳಾಗಿ ವಿಭಜಿಸುವ ಬಗ್ಗೆ ಹೇಳುತ್ತದೆ. == ಉಲ್ಲೇಖಗಳು ==